`ಕೋಬ್ರ` ಚಿತ್ರದಲ್ಲಿ ಭರ್ಜರಿ ಚೇಸಿಂಗ್
Posted date: 13 Thu, Feb 2014 – 08:41:46 AM

ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ ‘ಕೋಬ್ರ ಚಿತ್ರದ ಭರ್ಜರಿ ಚೇಸಿಂಗ್ ಸನ್ನಿವೇಶ ಹಾಗೂ ಕಾರು, ಆಟೋ ಬ್ಲಾಸ್ಟಿಂಗ್‌ನ ಚಿತ್ರೀಕರಣವನ್ನು ಕಂಬೀಪುರ ನೈಸ್‌ರೋಡ್‌ನಲ್ಲಿ ಐದು ದಿನಗಳ ಕಾಲ ಚಿತ್ರಿಸಲಾಗಿದೆ. ಮುವತ್ತೈದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮೂಡಿ ಬಂದಿರುವ ಈ ಸಾಹಸ  ಸನ್ನಿವೇಶದಲ್ಲಿ ನಾಯಕ ವಿಜಯ್, ಮಾಹಿನ್, ಧರ್ಮ ಮುಂತಾದವರು ಅಭಿನಯಿಸಿದ್ದರು. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.
     ಎಚ್.ವಾಸು ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಸೋನಾ ಛಾಬ್ರಾ, ಮಾಹಿನ್, ರವಿಕಾಳೆ, ಶೋಭ್‌ರಾಜ್, ಸತ್ಯಜಿತ್, ಫ಼ಜರ್‌ಖಾನ್, ದುಬೈ ರಫ಼ೀಕ್, ಧರ್ಮ, ಬಚ್ಚನ್, ನಸೀರ್, ಮಾಲತಿ ಸರ್ ದೆಶಪಾಂಡೆ, ಅನಂತವೇಲು, ಮಾ:ರಾಹುಲ್, ಮಾ:ಪ್ರಫುಲ್, ಮಾ:ಜಯಂತ್, ಕು.ಇಂಪನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
       ಮಾಹಿನ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ ಬರೆದಿದ್ದಾರೆ. ಧರ್ಮಾ ವಿಷ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೆ.ಡಿ.ವೆಂಕಟೇಶ್, ಗಣೇಶ್(ಚೆನೈ) ಸಾಹಸ ನಿರ್ದೇಶನ ‘ಕೋಬ್ರ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed